ಮತದಾನ ಮಾಡಿ …. ಪೆಟ್ರೋಲ್ ,ಡೀಸೆಲ್ ಖರೀದಿಯಲ್ಲಿ ಡಿಸ್ಕೌಂಟ್ ಪಡೆಯಿರಿ .

0
79
ನವದೆಹಲಿ :(ಕಿರಣ್ ವಾರ್ತಾ -Kiranvarta)ದೇಶದ  ಮತದಾನವನ್ನು ಮಾಡುವಲ್ಲಿ ಪ್ರೇರೇಪಿಸಲು ಚುನಾವಣಾ ಆಯೋಗ ಹತ್ತು ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ . ಅನೇಕ ಸಾಮಾಜಿಕ ಸಂಸ್ಥೆಗಳೂ ಜನಜಾಗೃತಿಯನ್ನು  ನಡೆಸುತ್ತಿವೆ . ಈ ನಿಟ್ಟಿನಲ್ಲಿ ಇದೀಗ “ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ “ವತಿಯಿಂದ ಜನರಿಗೆ ಮತದಾನ ಮಾಡುವಲ್ಲಿ ಪ್ರೇರೇಪಿಸಲು ಹೊಸ ಆಫರ್ ಘೋಷಿಸಿದೆ . ಮತದಾನ ದಿನದಂದು ಮತದಾನ ಮಾಡಿದ ನಂತರ ಪ್ರತೀ ಗ್ರಾಹಕರು ಬೆರಳ ಶಾಯಿಯ ಗುರುತನ್ನು ಪೆಟ್ರೋಲ್ ಪಂಪ್ ಗಳಲ್ಲಿ ತೋರಿಸಿ ಪೆಟ್ರೋಲ್ ತುಂಬಿಸಿದರೆ ಪ್ರತೀ ಲೀಟರ್ ನಲ್ಲಿ 50 ಪೈಸೆ ಡಿಸ್ಕೌಂಟ್ ನೀಡಲಾಗುವುದು ಎಂದು  “ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಅಜಯ್ ಬನ್ಸಲ್ ಎ ಎನ್ ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದರು . ಈ ಆಫರ್ ಮತದಾನದ ದಿನದಂದು ಬೆಳಗ್ಗೆ ಗಂಟೆ 8 ರಿಂದ ರಾತ್ರಿ ಗಂಟೆ 8 ರ ವರೆಗೆ ಅನ್ವಯಿಸುತ್ತದೆ . ದೇಶಾದ್ಯಂತ 7ಹಂತಗಳಲ್ಲಿ ಮತದಾನ ನಡೆಯಲಿದ್ದು ಪ್ರಥಮ ಹಂತದ ಮತದಾನ ಎಪ್ರಿಲ್ 11 ರಂದು ನಡೆಯಲಿದ್ದು ಕೊನೆಯ ಹಂತದ ಮತದಾನ ಮೇ 19 ರಂದು ನಡೆಯಲಿದೆ . ಮೇ 23 ರಂದು ಮತಗಣನೆ ನಡೆಯಲಿದೆ .
“ಕಡ್ಡಾಯವಾಗಿ ಮತದಾನ ಮಾಡಿ . ಪ್ರಜಾಪ್ರಭುತ್ವದ ಮೌಲ್ಯ ಉಳಿಸಿ ,ಸದೃಢ ಭಾರತವನ್ನು ಕಟ್ಟಲು ಸಹಕರಿಸಿ “ 

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ