ಪುಣೆ ಕಾತ್ರಜ್ ಚಾಲಕನಿಲ್ಲದೆ ಬಸ್ಸು ಚಲಿಸಿದಾಗ ….. ತಪ್ಪಿದ ದುರಂತ

0
243

ಪುಣೆ ಫೆ 5 :(www.kiranvarta.com)ಕಾತ್ರಜ್ ಬಸ್ ಡಿಪೋದ ಹತ್ತಿರಚಾಲಕ  ಪಿಎಂಟಿ ಬಸ್ಸನ್ನು ಚಾಲೂ ಸ್ಥಿತಿಯಲ್ಲಿ  ನಿಲ್ಲಿಸಿ ಮಧ್ಯಾಹ್ನದ ಊಟಕ್ಕೆಂದು ಹೋದ ಸಂದರ್ಭದಲ್ಲಿ ಬಸ್ಸು ಅಚಾನಕ್ಕಾಗಿ ಚಲಿಸತೊಡಗಿ ಎದುರಿಗೆ ನಿಂತಿದ್ದ ಇಂಡಿಕಾ ಗಾಡಿಗೆ ಡಿಕ್ಕಿ ಹೊಡೆದು ನಿಂತ ಕಾರಣ ದೊಡ್ಡ ದುರಂತವೊಂದು ತಪ್ಪಿತು . ಮಧ್ಯಾಹ್ನ 12:30 ರ ಸುಮಾರಿಗೆ ಚಾಲಕ ದಿಗಂಬರ ಖೋತ್ ಬಸ್ಸನ್ನು ಬಂದ್ ಮಾಡದೆ ಚಾಲೂ ಸ್ಥಿತಿಯಲ್ಲಿಟ್ಟು ತಪ್ಪೆಸಗಿದ ಕಾರಣಕ್ಕೆ ಚಾಲಕನನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ . ಶಿವಾಜನಗರದಿಂದ ಒಂದು ಟ್ರಿಪ್ ಪೂರ್ತಿಗೊಳಿಸಿ ಕಾತ್ರಜ್ ನಿಂದ ಶಿವಾಜಿನಗರಕ್ಕೆ ಹೊರಡಲಿತ್ತು . ಮದ್ಯಾಹ್ನದ ಊಟದ ಹೊತ್ತಾದ ಕಾರಣ ಬಸ್ಸನ್ನು ಪಪೂರ್ತಿ ಬಂದ್ ಮಾಡದೆ ಬಿಟ್ಟು ಹೋಗಿದ್ದರು .ಈ ಸಂದರ್ಭ ಬಸ್ಸಿನಲ್ಲಿ ಯಾವುದೇ ಪ್ರಯಾಣಿಕರು ಇರದಿರದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ . ಬಸ್ಸನ್ನು ಇಳಿಜಾರಿನಲ್ಲಿ ನಿಲ್ಲಿಸಿದ್ದ ಕಾರಣ ನಿಧಾನವಾಗಿ ಮುಂದಕ್ಕೆ ಚಲಿಸಲಾರಂಭಿಸಿತ್ತು . ಅದಾಗಲೇ ಸ್ವಾರ್ ಗೇಟ್ ಕಡೆಗೆ ಹೋಗುವ ಸಿಗ್ನಲ್ ಚಾಲೂ ಆದಾಗ ಬಸ್ಸಿನ ಎದುರಿಗಿದ್ದ ಇಂಡಿಕಾ  ಕಾರಿಗೆ ಡಿಕ್ಕಿ ಹೊಡೆದು ಹೆಚ್ಚಿನ ಅನಾಹುತ ಸಂಭವಿಸಲಿಲ್ಲ . ಇಂಡಿಕಾ ಕಾರಿನ ಚಾಲಕ ಗಣೇಶ್ ಎಂಬವರು ಅದೃಷ್ಟವಶಾತ್ ಪಾರಾದರು . ಇದನ್ನು ಗಮನಿಸಿದ ಜನರು ಒಮ್ಮೆಲೇ ಕಕ್ಕಾಬಿಕ್ಕಿಯಾಗಿ ಬಿಟ್ಟರು . ನಂತರ ಟ್ರಾಫಿಕ್ ಪೊಲೀಸ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು . ಇತ್ತೀಚೆಗಿನ ದಿನಗಳಲ್ಲಿ ಪುಣೆ ಮಹಾನಗರಪಾಲಿಕೆಯ ಬಸ್ಸು ಸೇವೆ ಎಲ್ಲೆಂದರಲ್ಲಿ ಹೊಸ ಹೊಸ ಆವಾಂತರಗಳನ್ನು ಸೃಷ್ಟಿಸುವ ಮೂಲಕ ಸುದ್ದಿಯಾಗುತ್ತಿದ್ದು ಪ್ರಯಾಣಿಕರು ಚಿಂತೆಗೀಡಾಗಿದ್ದಾರೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ