ಅಕ್ಷಯ್ ಕುಮಾರ್ ನಟಿಸಿದ “ಕೇಸರಿ “ಭರ್ಜರಿ ಹಿಟ್ :ಕೇವಲ ಮೂರು ದಿನದಲ್ಲಿ 50 ಕೋಟಿ ಬಾಚಿದ ಚಿತ್ರ

0
170
ಪುಣೆ :(www.kiranvarta.com)ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಳೆದ ಕೆಲವು ವರ್ಷಗಳಿಂದ ದೇಶಭಕ್ತಿಯ ಚಿತ್ರಗಳಲ್ಲಿ ನಟಿಸಿ  ಯಶಸ್ಸನ್ನು ಗಳಿಸಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ  . ಇದೀಗ ಬಾಕ್ಸ್ ಆಪೀಸ್ ನಲ್ಲಿ ಬಿಡುಗಡೆಗೊಂಡ “ಕೇಸರಿ “ಚಿತ್ರವೂ ಅದ್ದೂರಿ ಸಡ್ಡು ಮಾಡುತ್ತಿದ್ದು  ಕೇವಲ ಮೂರೇ ದಿನಗಳಲ್ಲಿ 50ಕೋಟಿಯನ್ನು ಬಾಚಿಕೊಂಡಿದೆ . “ಸಾರಾಗಡಿ “ಯುದ್ಧದ ಐತಿಹಾಸಿಕ ಕಥೆಯನ್ನು ಹೊಂದಿದ ಈ ಚಿತ್ರದಲ್ಲಿ ಅಕ್ಷಯ್ ಉತ್ತಮವಾಗಿ ನಟಿಸಿದ್ದಾರೆ . ಚಿತ್ರ ರಿಲೀಸ್ ಆದ ಪ್ರಥಮ ದಿನವೇ 21.70. ಬಂಪರ್  ಹಣವನ್ನು  ಪಡೆದುಕೊಂಡಿರುವುದು ಚಿತ್ರದ ಹೆಗ್ಗಳಿಕೆಯಾಗಿದೆ . ಈ ಚಿತ್ರವು ಬಿಡುಗಡೆಗೊಳ್ಳುವ ಮೊದಲೇ ಯು ಟ್ಯೂಬ್ ನಲ್ಲಿ ಟ್ರೇಲರ್ ಅದ್ಭುತ ಪ್ರಚಾರವನ್ನು  ಪಡೆದುಕೊಂಡಿದೆ .  ಶೀಘ್ರದಲ್ಲೇ ನೂರು ಕೋಟಿ ಕ್ಲಬ್ ನ್ನು ಸೇರುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿದೆ .
21 ಸಿಖ್ಖರ ಅದಮ್ಯ ಸಾಹಸದ ಕಥೆಯೇ “ಕೇಸರಿ “
122 ವರ್ಷಗಳ ಹಿಂದೆ 21 ಸಿಖ್ಖರು ಸುಮಾರು 10 ಸಾವಿರ ಅಫ್ಘಾನಿ ದಾಳಿಕೋರರೊಂದಿಗೆ ಸೆಣಸಾಡಿದ ಕಥೆಯಾಗಿದ್ದು “ಸಾರಾಗಡಿ ” ಯುದ್ಧ 1897 ರ ಡಿಶಂಬರ್ 12 ರಂದು ನಡೆದಿತ್ತು . ಈ ಯುದ್ಧದಲ್ಲಿ ಸಿಕ್ಖ್ ಸೈನಿಕರ ಹೋರಾಟ ಹಾಗೂ ಅಫ್ಘಾನಿಗಳನ್ನು ಮಣಿಸಿದ ವೀರ ಕಥೆ ಪ್ರೇಕ್ಷಕರನ್ನು ಸೆರೆದಿಡುವಲ್ಲಿ ಯಶಸ್ವಿಯಾಗಿದೆ .

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ