ನರೇಂದ್ರ ಮೋದಿಯವರಿಗೆ ಯುಎಇ ದೇಶದ ಅತ್ಯುನ್ನತ ಪುರಸ್ಕಾರ

0
99

ದುಬಾೖ: (kiranvarta)ಯುನೈಟೆಡ್ ಅರಬ್ ಎಮಿರೇಟ್ಸ್ (ಯು ಎ ಇ )ಕೊಡಮಾಡುವ ದೇಶದ ಅತ್ಯಂತ ಪ್ರತಿಷ್ಠಿತ ಝಾಯೆದ್‌ ಪುರಸ್ಕಾರಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಎರಡು  ದೇಶಗಳ ಮಧ್ಯೆ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರವನ್ನು ಮೋದಿ ವಹಿಸಿದ್ದು, ಈ ಸಾಧನೆಗೆ ಅವರನ್ನು ಪುರಸ್ಕರಿಸಲಾಗುತ್ತಿದೆ ಎಂದು ಯುಎಇ ಅಧ್ಯಕ್ಷ ಶೇಖ್‌ ಖಲೀಫಾ ಬಿನ್‌ ಜಾಯೇದ್‌ ಅಲ್‌ ನಹ್ಯನ್‌ ಘೋಷಿಸಿದ್ದಾರೆ. ಈ ಪುರಸ್ಕಾರವನ್ನು ರಾಜರು, ದೇಶದ ಅಧ್ಯಕ್ಷರು ಮತ್ತು ಪ್ರಧಾನಿಗಳಿಗೆ ನೀಡಲಾಗುತ್ತದೆ.

ಭಾರತದೊಂದಿಗೆ ನಾವು ಐತಿಹಾಸಿಕ ಸಂಬಂಧ ಹೊಂದಿದ್ದು, ಪ್ರಧಾನಿ ಮೋದಿ ಇದನ್ನು ಇನ್ನಷ್ಟು ಬಲಗೊಳಿಸಿದ್ದಾರೆ ಎಂದು ಅಧ್ಯಕ್ಷ ಶೇಖ್‌ ಖಲೀಫಾ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, “ಈ ಗೌರವವನ್ನು ಅತ್ಯಂತ ವಿನಯತೆಯಿಂದ ಸ್ವೀಕರಿಸುತ್ತಿದ್ದು, ಗೌರವಾನ್ವಿತ ದೊರೆಗಳಾದ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌’ರಿಗೆ ಧನ್ಯವಾದಗಳು ಎಂದಿದ್ದಾರೆ.

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ