ಪುಣೆ ನಗರದಲ್ಲಿ ಬಡವರಿಗೆ ಕೋವಿಡ್-19 ಚಿಕಿತ್ಸಾ ವೆಚ್ಚವನ್ನು  ಮಹಾನಗರಪಾಲಿಕೆ ಭರಿಸಲಿದೆ – ಕಿರಣ್ ವಾರ್ತಾ 

0
214
ಪುಣೆ :ಜೂನ್ .24: (ಕಿರಣ್ ವಾರ್ತಾ -www.kiranvarta.com)ಪುಣೆ ನಗರದಲ್ಲಿ ವಾಸಿಸುತ್ತಿರುವ  ಹಳದಿ ಮತ್ತು ಕೇಸರಿ ರೇಷನ್ ಕಾರ್ಡ್ ಹೊಂದಿದ ಬಡವರಿಗಾಗಿ ಪುಣೆ ಮಹಾನಗರಪಾಲಿಕೆ ಸಂತಸದ ಸುದ್ದಿಯನ್ನು ನೀಡಿದೆ . ಹಳದಿ ಮತ್ತು ಕೇಸರಿ ರೇಶನ್ ಕಾರ್ಡು ಹೊಂದಿದವರು  ಕೋವಿಡ್ -19 ಪೀಡಿತರಾದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಪುಣೆ ಮಹಾನಗರಪಾಲಿಕೆ ವತಿಯಿಂದ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು ಎಂದು ಪುಣೆ ಮಹಾನಗರಪಾಲಿಕೆಯ ಕಮಿಷನರ್ ಶೇಖರ್ ಗಾಯಕ್ ವಾಡ್ ಹಾಗೂ ಪುಣೆ ಮೇಯರ್ ಮುರಳೀಧರ ಮೋಹೋಲ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು .
ನಗರದ ಹತ್ತು ಖಾಸಗಿ ಆಸ್ಪತ್ರೆಗಳೊಂದಿಗೆ ಈ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು ಅದರ ಪ್ರಕಾರ ಈ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರಿಗಾಗಿ ಬೆಡ್ ಗಳನ್ನೂ ಮೀಸಲಿಡುವುದು ಹಾಗೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ . ಕೇಂದ್ರ ಸರಕಾರದ ಹೆಲ್ತ್ ಸ್ಕೀಮ್ ನಿಗದಿಪಡಿಸುವ ದರದಂತೆ ಮಹಾನಗರಪಾಲಿಕೆ ರೋಗಿಗಳ ಚಿಕಿತ್ಸೆಯ ಬಿಲ್ ಭರಿಸಲಿದೆ . 
ವಾರ್ಷಿಕ  1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ ಬಿಪಿ ಎಲ್ ಕುಟುಂಬಗಳಿಗಾಗಿ  ಅನಾರೋಗ್ಯ ಚಿಕಿತ್ಸೆಗಾಗಿ  ಮಹಾನಗರಪಾಲಿಕೆ ವತಿಯಿಂದ ವೆಚ್ಚವನ್ನು ಭರಿಸುವ 26, 2010 ಹೊಸ ಸ್ಕೀಮ್ ನ್ನು ಸರಕಾರ ಆರಂಭಿಸಿತ್ತು . ಇದರಂತೆ ರಾಜ್ಯ ಸರಕಾರದ ಯೋಜನೆಗಳಾದ ಮಹಾತ್ಮಾ ಜ್ಯೋತಿಬಾ ಪುಲೆ ಆರೋಗ್ಯ ಯೋಜನೆ ,ಆಯುಷ್ಮಾನ್ ಭಾರತ್ ಯೋಜನೆ ,ಜನರಲ್ ಇನ್ಸೂರೆನ್ಸ್ ಪಬ್ಲಿಕ್ ಸೆಕ್ಟರ್ ಅಸೋಸಿಯೇಶನ್ ಮುಂತಾದ ಯೋಜನೆಗಳ ಲಾಭವನ್ನೂ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ .
  ಕೋವಿಡ್ -19 ಚಿಕಿತ್ಸೆಗಾಗಿ ಒಡಂಬಡಿಕೆ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು -ಸಿಂಬಾಯಾಸಿಸ್ ಯೂನಿವೆರ್ಸಿಟಿ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ,ಲವಳೆ (ಮುಳ್ಶಿ ),ಭಾರತಿ ಹಾಸೀತಲ್ & ರಿಸರ್ಚ್ ಸೆಂಟರ್ ಕಾತ್ರಜ್ ,ಸಹ್ಯಾದ್ರಿ ಆಸ್ಪತ್ರೆ ಕೋತ್ರೋಡ್  ,ರಾವ್ ನರ್ಸಿಂಗ್ ಹೋಮ್ ,ಬಿಬ್ವೆವಾಡಿ ,ದೀನನಾಥ್ ಮಂಗೇಶ್ಕರ್ ಆಸ್ಪತ್ರೆ ,ಏರಂಡವನ ,ನವಲೆ ಮೆಡಿಕಲ್ ಕಾಲೇಜ್ & ಆಸ್ಪತ್ರೆ ನರೆಗಾಂವ್ ,ಬುದ್ರಾಣಿ ಹಾಸ್ಪಿಟಲ್ ಕೋರೆಗಾಂವ್ ಪಾರ್ಕ್ ,ಪೂನಾ ಹಾಸ್ಪಿಟಲ್ ,ಸದಾಶಿವ್ ಪೇಟ್ ,ಗ್ಲೋಬಲ್ ಆಸ್ಪತ್ರೆ ,ಪರ್ವತಿ ,ಭಕಾರೆ ಆಸ್ಪತ್ರೆ ಕಾತ್ರಜ್ ಸೇರಿವೆ . 

(ತಾಜಾ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಸಂಪರ್ಕಿಸಿ .. www.kiranvarta.com -ಕಿರಣ್ ವಾರ್ತಾ .. ಇದು ನಿಮ್ಮದೇ ಸುದ್ದಿ ವಾಹಿನಿ …ನಿಮ್ಮ ವ್ಯಾಪಾರ ,ವಹಿವಾಟು .ಜನ್ಮದಿನ ,ಅಭಿನಂದನೆ , ನಿಧನ ಸಂಬಂಧಿತ ಯಾವುದೇ ರೀತಿಯ ಜಾಹೀರಾತುಗಳನ್ನು ಸ್ವೀಕರಿಸಲಾಗುವುದು…   ಜಾಹೀರಾತಿಗಾಗಿ ಸಂಪರ್ಕಿಸಿ -9890916615…ಜಾಹೀರಾತು ನೀಡಿ ಪ್ರೋತ್ಸಾಹಿಸಿ )


ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ