ಪುಣೆ ನಗರದಲ್ಲಿ 5 ಕೋವಿಡ್ -19 ಪಾಸಿಟಿವ್ ಕೇಸ್ ಗಳು ಸಿಕ್ಕರೆ ಅಪಾರ್ಟ್ಮೆಂಟ್ ,ಸೊಸೈಟಿ ಸೀಲ್ -ಕಿರಣ್ ವಾರ್ತಾ

0
273

ಪುಣೆ ,ಜೂನ್ . 27: (ಕಿರಣ್ ವಾರ್ತಾ -www.kiranvarta.com)ಲಾಕ್ ಡೌನ್ ತೆರವುಗೊಳಿಸಿದ್ದರಿಂದಾಗಿ ಪುಣೆ ನಗರದಲ್ಲಿ ಕೊರೋನಾ ಸಾಂಕ್ರಾಮಿತರ ಸಂಖ್ಯೆ ದಿನೇ ದಿನೇ  ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪುಣೆ ಮಹಾನಗರಪಾಲಿಕೆಯು ಹೊಸ ಆದೇಶವನ್ನು ಜಾರಿಗೊಳಿಸಿದೆ . ಇನ್ನು ಮುಂದೆ ನಗರದ ಯಾವುದೇ ಪ್ರದೇಶದಲ್ಲಿ ,ಸೊಸೈಟಿಗಳಲ್ಲಿ ,ಅಪಾರ್ಟ್ ಮೆಂಟ್ ಗಳಲ್ಲಿ ,ಕಾಲೋನಿಗಳಲ್ಲಿ 5 ಅಥವಾ ಹೆಚ್ಚು ಕೋವಿಡ್ -ಪಾಸಿಟಿವ್ ಕೇಸ್ ಗಳು ಕಂಡುಬಂದರೆ ಆ ಸೊಸೈಟಿ ,ಅಪಾರ್ಟ್ ಮೆಂಟ್ ಅಥವಾ ಕಾಲೋನಿಗಳನ್ನು ಸಂಪೂರ್ಣವಾಗಿ 7 ರಿಂದ 14 ದಿನಗಳ ಕಾಲ ಸೀಲ್ ಮಾಡಲಾಗುವುದು . ಮಹಾನಗರಪಾಲಿಕೆಯ ಆಯುಕ್ತರಾದ ಶೇಖರ್ ಗಾಯಕ್ ವಾಡ್  ಈ ಮಾಹಿತಿಯನ್ನು ನೀಡಿದ್ದಾರೆ . ಆದುದರಿಂದ ಜನರು ಕೋವಿಡ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕಾಗಿದೆ . ಮನೆಯಿಂದ ಹೊರಗೆ ಬರುವಾಗ ತಪ್ಪದೆ ಮಾಸ್ಕ್ ಗಳನ್ನೂ ಕಡ್ಡಾಯವಾಗಿ ಧರಿಸಿಕೊಳ್ಳಿ . ಯಾವುದೇ ವಸ್ತುಗಳನ್ನು ಖರೀದಿಸಲು ಹೋದಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ . ಕಣ್ಣು ,ಮೂಗು ,ಬಾಯಿಯನ್ನು ಪದೇ ಪದೇ ಕೈಯಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಿ . ಮನೆಗೆ ಬಂದಾಗ ಸಾಬೂನು ನೀರಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ . ಇದು ಕಿರಣ್ ವಾರ್ತಾದ ಸಾಮಾಜಿಕ ಕಳಕಳಿಯ ಮಾತು

ಪ್ರತ್ಯುತ್ತರ ನೀಡಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ